ಝೀಬ್ರ ಮೀನು
ಸ್ಕಾರ್ಪಿಯೋನಿಫಾರ್ಮಿಸ್ ಗಣಕ್ಕೆ ಸೇರಿದ ಸಮುದ್ರವಾಸಿ ಮೀನು. ಜಿóೀಬ್ರದಂತೆ ಇದರ ದೇಹದ ಮೇಲೆ ಬಣ್ಣ ಬಣ್ಣದ ಪಟ್ಟೆಗಳಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಆಸ್ಟ್ರೇಲಿಯದ ಬಳಿಯ ಹವಳ ದಿಬ್ಬಗಳಲ್ಲಿ ವಾಸಿಸುತ್ತದೆ. ಟೆರಾಯಿಸ್ ವಾಲಿಟಾನ್ಸ್ ಇವರ ಶಾಸ್ತ್ರೀಯ ನಾಮ. ಇವರ ಹತ್ತಿರ ಸಂಬಂಧಿಯಾದ ಡೆಂಡ್ರೊಕೈರಸಿಗೂ ಭಾರತದ ಪೂರ್ವ ಕರಾವಳಿಯ ಸಣ್ಣ ಝರಿಗಳಲ್ಲಿ ಕಂಡುಬರುವ ಬ್ರ್ಯಾಕಿಡಾನಿಯು ರೇರಿಯೊ ಎಂಬುದಕ್ಕೂ ಜಿûೀಬ್ರ ಮೀನು ಎಂಬ ಹೆಸರೇ ಇದೆ.

ಟೆರಾಯಿಸ್ ಜಿûೀಬ್ರ ಮೀನು ಹವಳಗಳ ನಡುವೆ ಈಜಾಡುತ್ತಿದ್ದು ತನ್ನ ಅತಿ ದೊಡ್ಡ ಗಾತ್ರದ ಈಜುರೆಕ್ಕೆಗಳ ಸಹಾಯದಿಂದ ಎರೆ ಪ್ರಾಣಿಗಳನ್ನು ಹವಳಗಳ ನಡುವಿನ ಸಂದಿಗೆ ನೂಕಿ ಹಿಡಿದು ಭಕ್ಷಿಸುತ್ತದೆ. ಬೆನ್ನಿನ ಈಜುರೆಕ್ಕೆಯ ಪ್ರತಿಯೊಂದು ಮುಳ್ಳಿನ ಬುಡದಲ್ಲೂ ವಿಷವಸ್ತುವನ್ನು ಉತ್ಪಾದಿಸುವ ಗ್ರಂಥಿಯುಂಟು. ಈ ವಿಷ ಬಲು ಅಪಾಯಕಾರಿ ಎಂದು ಹೇಳಲಾಗಿದೆ.

ಭಾರತದಲ್ಲಿ ಕಾಣಬರುವ ಜಿûೀಬ್ರ ಮೀನಿನ ದೇಹದ ಮೇಲೆ ಕಿವಿರಿನಿಂದ ಬಾಲದ ರೆಕ್ಕೆಯವರೆಗೆ ಸಾಗುವ 4 ಪಟ್ಟೆಗಳುಂಟು. ಅಲ್ಲದೆ ಇದರ ಈಜು ರೆಕ್ಕೆಗಳ ಮೇಲೂ ಪಟ್ಟೆಗಳಿವೆ. ಈ ಮೀನನ್ನು ತೊಟ್ಟಿಗಳಲ್ಲಿ ಸಾಕಬಹುದು.
(ಬಿ.ಎನ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ